ಚಿತ್ರ: ರಿಷಿ
ಸಾಹಿತ್ಯ: ವಿ. ಮನೋಹರ್
ಸಂಗೀತ: ಗುರುಕಿರಣ್

ಗಾಯನ: ಕೆ. ಚಿತ್ರಾ, ಸೋನು ನಿಗಮ್

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ ಕಣ್ತುಂಬ ಪ್ರೀತಿ ಹಬ್ಬ |೨|

ಆ ಅಹ ಬೇವು ಕೂಡ ಸಿಹಿಯಾಯ್ತು ಬೆಲ್ಲ ಮೆಲ್ಲ ಜೇನಾಯ್ತು
ಮನೆಯ ತುಂಬ ನಗುವಿನ ತೋರಣ ತೂಗಿ ತೂಗಿತು

ಚಿಂತೆ ನೋವು ಹಗುರಾಯ್ತು ಸುಗ್ಗಿ ಸಿರಿಯ ಮಳೆಯಾಯ್ತು
ಮನೆಯ ತುಂಬ ಹರುಷದ ಹೂರಣ ಆಹಾ ಮೂಡಿತು

ಎಲ್ಲೆಲು ಜೀವ ಕಳೆ ಜೀವಕಿದು ಹೂವ ಕಳೆ |೨|

ಹಳೆಯ ಕೊಳೆಯ ತೊಳೆಯ ಬಂತು ರಂಗಿನ ಯುಗಾದಿ!

ಎಲೆಲ್ಲೆಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ

ಈ ಸಂಬಂಧ ಬೆಸೆದ ಹಬ್ಬ ಕಣ್ತುಂಬ ಪ್ರೀತಿ ಹಬ್ಬ

ಕಳೆದುದೆಲ್ಲ ದೊರಕಾಯ್ತು ದೊರಕಿದೆಲ್ಲಾ ವರವಾಯ್ತು
ಹೊಸತು ಹಾದಿ ತೋರಿ ಬಾಳ ಗೀತೆಯಾಯಿತು
ಹೃದಯ ಕುಣಿವ ನವಿಲಾಯ್ತು ಮನೆಯ ತುಂಬ ನಲಿವಾಯ್ತು
ಎಂದು ಹೀಗೆ ಇರಲಿ ಬಾಳಿಗಂತ ಕೋರಿತು

ಇನ್ನೆಲ್ಲ ಶುಭಶಕುನ ಅನುದಿನವು ಸನ್ಮಾನ |೨|

ಮರೆಯದಂತ ಸವಿ ಸವಿಗಳಿಗೆ ತಂದಿತು ಯುಗಾದಿ

ಎಲೆಲ್ಲೆಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ
ಈ ಸಂಭಂದ ಬೆಸೆದ ಹಬ್ಬ ಕಣ್ತುಂಬ ಪ್ರೀತಿ ಹಬ್ಬ |೨|

Category: ಕನ್ನಡ ಚಿತ್ರಸಾಹಿತ್ಯ
Category: ರಿಷಿ ಚಿತ್ರ
Category: ವಿ.ಮನೋಹರ್ ಸಾಹಿತ್ಯ
Category:Kannada